ಡೆಲಿವರಿಗಳನ್ನು ಸುಲಭವಾಗಿಸುವುದು, ವಿಶ್ವಾಸಾರ್ಹವಾಗಿಸುವುದು ಮತ್ತು ಎಲ್ಲರಿಗೂ ಲಭ್ಯವಾಗುವಂತೆ ಮಾಡುವುದು ನಾವು ಮಾಡುವ ಕೆಲಸದ ಕೇಂದ್ರಬಿಂದುವಾಗಿದೆ. ಅದಕ್ಕಾಗಿಯೇ ನಾವು ಈ ಪ್ರಯಾಣವನ್ನು ಪ್ರಾರಂಭಿಸಿದ್ದೇವೆ ಮತ್ತು ಅದು ಪ್ರತಿದಿನ ನಮ್ಮನ್ನು ಪ್ರೇರೇಪಿಸುತ್ತದೆ. ಈ ಬದ್ಧತೆಯು ನಮ್ಮ ಉದ್ದೇಶವನ್ನು ನಿಖರವಾಗಿಸಿದೆ ಮತ್ತು ಬಲಪಡಿಸಿದೆ: ಶತಕೋಟಿ ಕನಸುಗಳನ್ನು ನನಸಾಗಿಸುತ್ತ, ಒಂದು ಸಮಯದಲ್ಲಿ ಒಂದು ಡೆಲಿವರಿ. ಇದನ್ನು ಸಾಧಿಸಲು, ನಮ್ಮ ಎಲ್ಲಾ ಗ್ರಾಹಕರು ಮತ್ತು ಚಾಲಕ-ಪಾಲುದಾರರನ್ನು ಅತ್ಯುನ್ನತ ಮಟ್ಟದ ಗೌರವದಿಂದ ಮತ್ತು ನ್ಯಾಯಯುತವಾಗಿ ನಡೆಸಿಕೊಳ್ಳಲು ನಾವು ಬದ್ಧರಾಗಿದ್ದೇವೆ.
ಬೆಂಬಲ ಒದಗಿಸುವ ಮತ್ತು ಸಕಾರಾತ್ಮಕವಾದ ಸಮುದಾಯವನ್ನು ಕಾಪಾಡಿಕೊಳ್ಳಲು, ಗ್ರಾಹಕರು ಈ ಕೆಳಗಿನ ಮಾರ್ಗಸೂಚಿಗಳಿಗೆ ಬದ್ಧರಾಗಿರುವಂತೆ ನಾವು ಕೇಳಿಕೊಳ್ಳುತೇವೆ:
ಸಮುದಾಯ ಮಾರ್ಗಸೂಚಿಗಳು
- ವಿನಯದಿಂದ ಮತ್ತು ಗೌರವದಿಂದ ವರ್ತಿಸಿ – ಎಲ್ಲರೊಂದಿಗೂ ಸೌಜನ್ಯದಿಂದ ಮತ್ತು ವೃತ್ತಿಪರವಾಗಿ ನಡೆದುಕೊಳ್ಳಿ. ನಿಂದನಾತ್ಮಕ ಭಾಷೆಯನ್ನು ಬಳಸಬೇಡಿ ಅಥವಾ ಇತರರಿಗೆ ಕಿರುಕುಳ ನೀಡಬೇಡಿ.
- ಸುರಕ್ಷಿತವಾದ, ಕಾನೂನುಬದ್ಧವಾದ ಮತ್ತು ಸುರಕ್ಷಿತವಾಗಿ ಪ್ಯಾಕ್ ಮಾಡಿದ ವಸ್ತುಗಳನ್ನು ಮಾತ್ರ ಕಳುಹಿಸಿ – ಎಲ್ಲಾ ವಸ್ತುಗಳು ಕಾನೂನಿನ ಮಾನದಂಡಗಳನ್ನು ಪೂರೈಸುತ್ತವೆಯೇ ಮತ್ತು ಚೆನ್ನಾಗಿ ಪ್ಯಾಕ್ ಆಗಿವೆ ಎಂದು ಖಚಿತಪಡಿಸಿಕೊಳ್ಳಿ. ಆಫ್ ಲೈನ್ ಟ್ರಿಪ್ಗಳು ಅಥವಾ ನ್ಯಾಯಯುತವಲ್ಲದ ವಹಿವಾಟುಗಳನ್ನು ವಿನಂತಿಸಬೇಡಿ ಅಥವಾ ಪ್ರೋತ್ಸಾಹಿಸಬೇಡಿ.
- ನಿಗದಿತ ಪಿಕಪ್ ಸಮಯ ಮತ್ತು ಸ್ಥಳದಲ್ಲಿ ಸಿದ್ಧರಾಗಿರಿ – ವಿಳಂಬಗಳನ್ನು ತಪ್ಪಿಸಲು ಸಮಯಕ್ಕೆ ಸರಿಯಾಗಿ ಬನ್ನಿ.
- ವಾಹನಕ್ಕೆ ತುಂಬಾ ದೊಡ್ಡದಾದ ಸರಕುಗಳನ್ನು ಲೋಡ್ ಮಾಡಬೇಡಿ ಅಥವಾ ವಾಹನವನ್ನು ಅದರ ಸಾಮರ್ಥ್ಯಕ್ಕಿಂತ ಹೆಚ್ಚಾಗಿ ಓವರ್ ಲೋಡ್ ಮಾಡಬೇಡಿ.
- ನಿಮ್ಮ ಅಗತ್ಯಗಳಿಗೆ ಸರಿಯಾದ ವಾಹನ ವರ್ಗವನ್ನು ಆರಿಸಿ – ನಿಮ್ಮ ಡೆಲಿವರಿಗೆ ಸೂಕ್ತವಾದ ವಾಹನ ಪ್ರಕಾರವನ್ನು ಆಯ್ಕೆ ಮಾಡಿ.
- ಅಪ್ನಲ್ಲಿ ಪ್ರದರ್ಶಿಸಲಾದ ಪೂರ್ಣ ಶುಲ್ಕವನ್ನು ಪಾವತಿಸಿ – ಅಪ್ನಲ್ಲಿ ತೋರಿಸಲಾದ ಮೊತ್ತಕ್ಕೆ ಪಾವತಿಗಳು ಹೊಂದಿಕೆಯಾಗುವುದನ್ನು ಖಚಿತಪಡಿಸಿಕೊಳ್ಳಿ. ಆರ್ಡರ್ಗಳನ್ನು ರದ್ದುಗೊಳಿಸಬೇಡಿ ಮತ್ತು ಪಾರ್ಟ್ನರ್ ಅನ್ನು ತಪ್ಪಾಗಿ ದೂಷಿಸಬೇಡಿ.
- ಎಲ್ಲಾ ವ್ಯಕ್ತಿಗಳನ್ನು ಗೌರವಿಸಿ – ಸಂವಹನಗಳು ಯಾವುದೇ ರೀತಿಯ ಪಕ್ಷಪಾತ ಅಥವಾ ತಾರತಮ್ಯದಿಂದ ಮುಕ್ತವಾಗಿರುವುದನ್ನು ಖಚಿತಪಡಿಸಿಕೊಳ್ಳಿ. ಲಿಂಗ, ಧರ್ಮ, ಜಾತಿ ಅಥವಾ ಜನಾಂಗದ ಆಧಾರದ ಮೇಲೆ ತಾರತಮ್ಯ ಮಾಡಬೇಡಿ.
ಈ ಮಾರ್ಗಸೂಚಿಗಳನ್ನು ಅನುಸರಿಸುವ ಮೂಲಕ, ನಾವು ಉತ್ಕೃಷ್ಟತೆಗೆ ಸಮರ್ಪಿತವಾದ ಗೌರವಾನ್ವಿತವಾದ ಮತ್ತು ಪರಿಣಾಮಕಾರಿಯಾದ ಸಮುದಾಯವನ್ನು ನಿರ್ಮಿಸುತ್ತೇವೆ. ಪೋರ್ಟರ್ ಸಮುದಾಯದ ಮೌಲ್ಯಯುತ ಸದಸ್ಯರಾಗಿದ್ದಕ್ಕಾಗಿ ಧನ್ಯವಾದಗಳು.